ತಕಿಟ ತಕಿಟ ಧೋಂ

Wednesday, November 10, 2010

ಒಂದು ಪದ್ಯ ಮತ್ತು ಅನುವಾದ.

ಯಾವುದೋ ಒಂದು ಪುಸ್ತಕದಲ್ಲಿ ನನಗೆ ಈ ಪದ್ಯ ಸಿಕ್ಕಿತು. ಓದಿದಾಗ ನಾವು ಶಿಕ್ಷಕರು ಇದನ್ನು ಭಗವದ್ಗೀತೆಯಂತೆ ನಿತ್ಯ ಪಠನ ಮಾಡುತ್ತಿರಬೇಕು. ಮತ್ತು ತರಗತಿಗೆ ಹೋಗುವ ಮುನ್ನ ಇದರತ್ತ ಒಮ್ಮೆಯಾದರೂ ಕಣ್ಣು ಹಾಯಿಸುತ್ತಲೇ ಇರಬೇಕು ಎಂದೆನಿಸಿತು. ಅದನ್ನು ಚೆಂದವಾಗಿ ಪ್ರಿಂಟ್ ಮಾಡಿ ನನ್ನ ಟೇಬಲ್ ಮೇಲೆ ಇಟ್ಟುಕೊಂಡಿದ್ದೆ. ಪ್ರತಿಬಾರಿಯೂ ತರಗತಿಗೆ ಹೋಗುವ ಮುನ್ನ ಅದರತ್ತ ಕಣ್ಣು ಹಾಯಿಸಿ ಮತ್ತೆ ತರಗತಿಗೆ ಹೋಗುತ್ತಿದ್ದೆ. ಅದರ ಕನ್ನಡ ಅನುವಾದವನ್ನೂ ಮಾಡಿ ಇಟ್ಟುಕೊಂಡಿದ್ದೆ. ಅದನ್ನು ಓದಿದ ನನ್ನ ಗೆಳೆಯರು ಅದರ ಒಂದು ಪ್ರತಿಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಅದನ್ನು ಇಲ್ಲಿ ಕೊಟ್ಟಿದ್ದೇನೆ.

My Prayer.


 O God, giver of the gift of Life,


Bless me this day as I go to teach,


I thank you for my career.


                 And for the health and enthusiasm


                 You have given me,


                 I thank you for my teaching skill,


                 And the joy I find in it.


I thank you for my students,


And friends, in whose company


Joys are doubled, sorrows soothe,


And weakness changed into strength.


             Help me to be cheerful to day,
        
             Kind and loving to my students,


             That they may be happy


             In my company.


ಕನ್ನಡ ಅನುವಾದ:


ಬದುಕಿನ ದಾನ ನೀಡಿದ ದೈವವೇ,
ಪಾಠ ಹೇಳ ಹೊರಟ ನನ್ನನ್ನು ಆಶೀರ್ವದಿಸು.
ಈ ವೃತ್ತಿಗಾಗಿ ನಾನು ಸದಾ ಋಣಿ.


              ನೀ ನೀಡಿದ ಉತ್ಸಾಹ ಮತ್ತು ಆರೋಗ್ಯಕ್ಕಾಗಿ,
                  ಪಾಠ ಹೇಳುವ ಕಲೆಗಾಗಿ
                                ಅದರಿಂದ ನಾ ಪಡೆವ ಆನಂದಕ್ಕಾಗಿ
                                                 ವಂದನೆಗಳು ನಿನಗೆ. 


ನನ್ನ ಸಜ್ಜನ ವಿದ್ಯಾರ್ಥಿಗಳಿಗಾಗಿ ಕೃತಜ್ಞತೆಗಳು ನಿನಗೆ.
      ಮತ್ತು ಗೆಳೆಯರಿಗಾಗಿ, ಯಾರ ಸಹವಾಸದಲ್ಲಿ
             ಸಂತೋಷ ಇಮ್ಮಡಿಯಾಗಿ, ಕಷ್ಟಗಳು ಕರಗಿ
                     ಬಲಹೀನತೆಯು ಬಲವಾಗಿ ಬದಲಾಗಿದೆಯೊ ಅದಕ್ಕಾಗಿ;.


ಇಂದು ನನ್ನ ಮಕ್ಕಳ ಮುಖದಲ್ಲಿ ನಗು ಮಾಸದಿರಲಿ.
     ಮಕ್ಕಳ ಮೇಲೆ ದಯೆ ಮತ್ತು ಪ್ರೀತಿ ಮಳೆಯಾಗಿ ಸುರಿಯಲಿ.
       ಮತ್ತು ಅವರು ನನ್ನೊಂದಿಗೆ ಸಂತೋಷದಿಂದಿರಲಿ.
          ಇದಿಷ್ಟನ್ನು ಮಾತ್ರ ಕರುಣಿಸು ತಂದೆಯೇ. 

ಇದನ್ನು ಬರೆದವರು ಯಾರು ಎನ್ನುವುದು ತಿಳಿದಿಲ್ಲ ಮತ್ತು ಈಗ ಇದನ್ನು ಯಾವ ಪುಸ್ತಕದಿಂದ ನಾನು ಬರೆದಿಟ್ಟುಕೊಂಡೆ ಎನ್ನುವುದೂ ನೆನಪಿಲ್ಲ.

ಕಳೆದವಾರ ಉಡುಪಿಅ ಗುರುರಾಜ ಸನೀಲ್ ಇವರು ಬರೆದ "ಹಾವು ನಾವು" ಪುಸ್ತಕ ಓದಿದೆ. ಜತೆಗೆ Mark Haddon ಬರೆದ curious incident of the dog in the night time"  ಓದಿದೆ. ಸಮಗ್ರ ಕುಂವೀ ಓದಲು ಇನ್ನೂ ಹೆಚ್ಚಿನ ಸಮಯ ಬೇಕಾಗುತ್ತದೆ ಎಂದೆನಿಸಿತು. ಸದ್ಯಕ್ಕೆ ನೂರೈವತ್ತು ಪುಟಗಳನ್ನು ಮಾತ್ರ ಓದಿದ್ದೇನೆ.

1 comment:

  1. ಹೀಗೇ ನನ್ನಜ್ಜ (ಎ.ಪಿ. ಸುಬ್ಬಯ್ಯ - ೧೯೦೧ ರಿಂದ ೧೯೭೭ ಬಾಳಿದವರು)ರುಡ್ಯಾರ್ಡ್ ಕಿಪ್ಲಿಂಗನ IF ಪದ್ಯವನ್ನು ‘ಆದರೆ’ ಎಂಬ ಹೆಸರಿನಲ್ಲಿ ಅನುವಾದಿಸಿ ಸಂಪರ್ಕಕ್ಕೆ ಬಂದವರೆಲ್ಲರಿಗೂ ಮನನ ಮಾಡಿಸುತ್ತಿದ್ದದ್ದು ನೆನಪಾಯ್ತು. ಆ ಅನುವಾದದ ಪ್ರತಿ ಸಿಕ್ಕಿದರೆ ಮುಂದೆ ಹೀಗೇ ಹಾಕುತ್ತೇನೆ.
    ಅಶೋಕವರ್ಧನ

    ReplyDelete